ಜೀವನ ಎಂದರೆ ಒಂದಿಷ್ಟು ಭರವಸೆ, ಒಂದಿಷ್ಟು ಕಠಿಣ ಪರಿಸ್ಥಿತಿಗಳು, ಮತ್ತು ನಿರಂತರ ಓಟ. ಎಲ್ಲರಿಗೂ ಗುರಿಯಿರುವ ಹಾಗೆ ನನಗೂ ಒಂದು ದಾರಿ ಇದೆ, ಆದರೆ ನಾನು ಎಷ್ಟು ದೂರ ಓಡಬಹುದು ಎಂಬುದರ ಖಚಿತತೆ ಇಲ್ಲ. ಆದರೂ, ನಾನು ತಲುಪುವ ಪ್ರತಿಯೊಂದು ಹಂತದಲ್ಲೂ ಏನಾದರೂ ಸಾಧಿಸಬೇಕು, ಮೌಲ್ಯವಂತನಾಗಬೇಕು.
ಪ್ರತಿದಿನವೂ ಹೊಸ ಸವಾಲುಗಳೊಂದಿಗೆ ಹುಟ್ಟಿಕೊಳ್ಳುವ ಕನಸುಗಳು ನನ್ನನ್ನು ಮುನ್ನಡೆಸುತ್ತವೆ. ಓಟದ ವೇಗದ ಬಗ್ಗೆ ಚಿಂತಿಸುವುದಿಲ್ಲ, ಆದರೆ ದಾರಿ ಸರಿಯಾಗಿದೆಯೇ ಎಂಬುದನ್ನು ತಲುಪಿದ ತಾಣದಲ್ಲಿ ಅರ್ಥೈಸಿಕೊಳ್ಳಬೇಕು. ಜಯ ಮತ್ತು ಸೋಲು ಎರಡೂ ಈ ಪಯಣದ ಭಾಗ – ಆದರೆ ಪ್ರಯತ್ನವೇ ನನ್ನ ನಿಜವಾದ ಗೆಲುವು.
✍️ ಪೂರ್ಣಚಂದ್ರ ಕಾಶಿ
Leave a comment